ಸರಿಗಮಪ ಸೀಸನ್ 14 : ಸ್ಪರ್ಧಿ ಸೃಜನ್ ಪಟೇಲ್ ಹಿಂದಿದೆ ಕಣ್ಣೀರಿನ ಕಥೆ | Filmibeat Kannada

2017-12-11 3,946

Zee Kannada channel's popular show 'SaReGaMaPa L'il Champs Season 14' has started from last Saturday. (December 9). There is a very sad story behind the contestant Srujan Patel. Watch Video.



'ಜೀ ಕನ್ನಡ' ವಾಹಿನಿಯಲ್ಲಿ ಮತ್ತೆ 'ಸರಿಗಮಪ' ಕಾರ್ಯಕ್ರಮ ಶುರು ಆಗಿದೆ. 'ಸರಿಗಮಪ ಸೀಸನ್ 14' ಕಾರ್ಯಕ್ರಮ ಕಳೆದ ಶನಿವಾರದಿಂದ ಪ್ರಸಾರ ಆಗುತ್ತಿದೆ.. ಪ್ರತಿ ಬಾರಿಗಿಂತ ಈ ಬಾರಿಯ ಕಾರ್ಯಕ್ರಮದ ಸ್ಪರ್ಧಿಗಳು ತುಂಬ ವಿಶೇಷವಾಗಿ ಇದ್ದಾರೆ. ಸಣ್ಣ ಹಳ್ಳಿಯಿಂದ ಬಡತನದಲ್ಲಿ ಬೆಳೆಯುತ್ತಿರುವ ಕೆಲವು ಮಕ್ಕಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಆಗಿದ್ದಾರೆ. ಅದರಲ್ಲಿಯೂ ಮಂಡ್ಯದ ಸೃಜನ್ ಪಟೇಲ್ ಎಂಬ ಒಬ್ಬ ಹುಡುಗ ಕಷ್ಟಪಟ್ಟು ಕಾರ್ಯಕ್ರಮದ ವೇದಿಕೆ ಏರಿದ್ದಾನೆ. ಅಂದಹಾಗೆ, ಸೃಜನ್ ಪಟೇಲ್ ಎಂಬ ಈ ಹುಡುಗನ ಕಥೆ ಕೇಳಿ ಮೂರು ತೀರ್ಪುಗಾರರು ಹಾಗೂ ವೀಕ್ಷಕರ ಮನ ಕರಗಿದೆ. ಸಂಗೀತದಲ್ಲಿ ಸಾಧನೆ ಮಾಡಬೇಕು ಎಂಬ ಛಲ ಇರುವ ಈ ಹುಡುಗ ಅದಕ್ಕಾಗಿ ತನ್ನ ಪ್ರೀತಿಯ ಕರುವನ್ನೇ ಮಾರಿದ್ದಾನೆ.ಸೃಜನ್ ಪಟೇಲ್ ಎಂಬ 13 ವರ್ಷದ ಮಂಡ್ಯದ ಹುಡುಗ ಈಗ 'ಸರಿಗಮಪ ಸೀಸನ್ 14' ಕಾರ್ಯಕ್ರಮದ ಸ್ಪರ್ಧಿ ಆಗಿದ್ದಾನೆ.

Videos similaires